Saturday, October 9, 2010

ಒಂದು ಮನವಿ

ಗೆಳೆಯರೇ....
ಭಾರತದ ಪರಿಸರದ ಬಗ್ಗೆ ಮಾತಾಡುವುದು ಬಹಳ ಇದೆ. ಇತ್ತೀಚೆಗಂತೂ ಹುಲಿಗಳ  ಗದ್ದಲ ವಿಪರೀತವಾಗಿದೆ. ಅರಣ್ಯ ಹಕ್ಕುಗಳ ಕಾಯಿದೆಯನ್ನು ಜಾರಿಗೆ ತರುವ ಹಂತದಲ್ಲಿ ಈ ಗದ್ದಲ ಎದ್ದಿರುವುದು ಆಚ್ಚರಿಯ ಸಂಗತಿ. ಈ ಗದ್ದಲದ ಹಿಂದೆ ದೊಡ್ಡ ಹುನ್ನಾರವೇ ಇರುವಂತಿದೆ.
ಈ ಹುನ್ನಾರದ ಹಿಂದೆ ದೊಡ್ಡ ದಂಡೇ ಇದೆ. ಇವರ ಮುಂದೆ ಅಸಂಖ್ಯ ಪ್ರಶ್ನೆಗಳಿವೆ. ೧೯೭೩ ಹುಲಿ ಯೋಜನೆ ಆರಂಭವಾದಾಗ ಅಂದಾಜು ೧೨೦೦ ಹುಲಿಗಳಿದ್ದವೆಂದು ಅಂದಾಜು ಮಾಡಲಾಗಿತ್ತು. ೨೦೦೮ರ WWF  ವರದಿಯ ಪ್ರಕಾರ ಭಾರತದಲ್ಲಿ ೧೪೦೦ ಹುಲಿಗಳಿವೆ.
ಹಾಗಾದರೆ ಈ ಕಳೆದ ೩೭ ವರ್ಷಗಳಲ್ಲಿ ಇಡೀ ದೇಶದ ಹುಲಿಯೋಜನೆ/ಅರಣ್ಯ ಇಲಾಖೆ ಸಿಬ್ಬಂದಿ ಮತ್ತು  ಹುಲಿವಾದಿಗಳು ಏನು ಮಾಡುತ್ತಿದ್ದರು?
ಈ ಅವಧಿಯಲ್ಲಿ ವೆಚ್ಚಮಾಡಲಾದ ಸಾವಿರಾರು ಕೋಟಿ ಹಣ ಎಲ್ಲಿ ಹೋಯಿತು?
ಇರಲಿ ಇದನ್ನು ಇನ್ನು ಮುಂದೆ ಮಾತಾಡೋಣ.,....
ಆರಂಭಕ್ಕೆ ನನ್ನದೊಂದು ಪದ್ಯ ಇದೆ...
ಓದಿ.... ಸಾಧ್ಯವಾದರೆ  ಕಾಮೆಂಟ್  ಮಾಡಿ.
ವಂದನೆಗಳು

No comments:

Post a Comment